ಫಿರೋಝಾಬಾದ್: ಉತ್ತರಪ್ರದೇಶದ ಫಿರೋಝಾಬಾದ್ ನಲ್ಲಿ ಶಂಕಿತ ಡೆಂಗ್ಯೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದ 10 ದಿನಗಳಲ್ಲಿ 45 ಮಕ್ಕಳು ಸೇರಿದಂತೆ 53 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಸರಕಾರವು ಈ ಸಾವಿನ ಕಾರಣ ಕುರಿತು ತನಿಖೆಗೆ ಮುಂದಾಗಿದೆ. ಫಿರೋಝಾಬಾದ್ ವೈದ್ಯಕೀಯ ಕಾಲೇಜಿನಲ್ಲಿ, ದೃಶ್ಯಗಳು ಭಯಾನಕವಾಗಿವೆ. ಜ್ವರದಿಂದ ಬಳಲುತ್ತಿರುವ ಮಕ್ಕಳ ಸಾಲುಗಳು ಕಂಡುಬಂದಿದ್ದು, ಮಕ್ಕಳ ಪೋಷಕರು ಚಿಂತಿತರಾಗಿದ್ದಾರೆ ಹಾಗೂ ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಆರು ವರ್ಷದ ಲಕ್ಕಿ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು,