ಹಿಮಾಚಲ ಪ್ರದೇಶದ ಲಾಹಾಲ್ ಹಾಗೂ ಸ್ಪಿತಿ ಜಿಲ್ಲೆಯ ಬೆಟ್ಟಪ್ರದೇಶದಲ್ಲಿ ಭಾರೀ ಹಿಮಪಾತವಾಗಿದೆ. ಇಲ್ಲಿಗೆ ಟ್ರೆಕ್ಕಿಂಗ್ಗೆಂದು ಹೋಗಿದ್ದ 45 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 35 ಜನ ರೂರ್ಕಿಯ ಐಐಟಿ ವಿದ್ಯಾರ್ಥಿಗಳಾಗಿದ್ದಾರೆ.ಈ ತಂಡ ಹಾಂಪ್ಟಾ ಪಾಸ್ನಲ್ಲಿ ಟ್ರೆಕ್ಕಿಂಗ್ಗೆ ಹೋಗಿದ್ದು, ಪ್ರಸಿದ್ಧ ಪ್ರವಾಸಿ ತಾಣವಾದ ಮನಾಲಿಗೆ ಹಿಂದಿರುಗಬೇಕಿತ್ತು. ಆದ್ರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನಾಪತ್ತೆಯಾಗಿರುವ ವಿದ್ಯಾರ್ಥಿಗಳಲ್ಲೊಬ್ಬರ ತಂದೆ ರಾಜೀವ್ ಸಿಂಗ್ ತಿಳಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆ