ಬೆಂಗಳೂರು : ಕಡಿಮೆ ಬಡ್ಡಿ ದರದಲ್ಲಿ 400 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ರೂ. ಬಡ್ಡಿ ಪಡೆದು ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಸೈಯ್ಯದ್ ಇಬ್ರಾಹಿಂ ಅಲಿಯಾಸ್ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್ ಅಲಿಯಾಸ್ ವಿಕ್ಕಿ ಅಲಿಯಾಸ್ ವಿವೇಕಾನಂದ, ಕ್ರಿಸ್ಟೋಫರ್ ಅಲಿಯಾಸ್ ರಾಘವನ್, ರಘುವರನ್ ಅಲಿಯಾಸ್ ರಘು, ಶಿವರಾಮನ್ ಅಲಿಯಾಸ್ ನಾಗರಾಜು ಬಂಧಿತರು.ಆರೋಪಿಗಳಿಂದ