ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಿನ್ನೆ ಗೋವುಗಳ ಪೂಜೆ ಮಾಡಲಾಗಿದೆ. ಆದರೆ ಗೋ ಪೂಜೆ ದಿನವೇ ಹಾಲು ಕೊಡುವ ಹಸುಗಳು ಸಾಲು ಸಾಲು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಸುಳುಗೋಡು ಗ್ರಾಮ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಹಾಲು ಕೊಡುವ 3 ಹಸುಗಳು ಸುಳುಗೋಡು ಮಾಳವಿಕ ಮಹೇಶ್ ಎಂಬುವವರ ಮನೆಯಲ್ಲಿ ಎರಡು ದಿನಗಳ ಹಿಂದೆ ಅಸುನೀಗಿವೆ. ಆದರೆ ಹಸುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಇವುಗಳ ಸಾವಿಗೆ ನಿಖರ