ಸ್ಥಳೀಯ ಬಿಜೆಪಿ ನಾಯಕರೊಬ್ಬರ ಲಸಿಕೆ ಪ್ರಮಾಣ ಪತ್ರದಲ್ಲಿ ಐದು ಬಾರಿ ಲಸಿಕೆ ನೀಡಲಾಗಿದೆ ಎಂದು ನಮೂದಿಸಲಾಗಿದ್ದು ಆರನೇ ಲಸಿಕೆಗೆ ದಿನಾಂಕವನ್ನೂ ನಿಗದಿಯಾಗಿದೆ. ಉತ್ತರ ಪ್ರದೇಶದ ಸರ್ದಾನಾ ಏರಿಯಾದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ವರದಿಯಾಗಿದೆ. ಇದೊಂದು ಕಿಡಿಗೇಡಿತನದ ಕೃತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. 73 ವರ್ಷದ ರಾಂಪಾಲ್ ಸಿಂಗ್ ಎಂಬವರು ಬೂತ್ ಸಂಖ್ಯೆ 79ರ ಬಿಜೆಪಿ ಅಧ್ಯಕ್ಷರಾಗಿದ್ದರು. ಇವರು ಹಿಂದೂ ಯುವ ವಾಣಿಯ ಸದಸ್ಯರೂ ಸಹ ಹೌದು. ಕೊರೊನಾ