ಲಾಕ್ ಡೌನ್ ಆರಂಭದಲ್ಲಿ ಜೋಡಿಗಳು ವಿಭಿನ್ನವಾಗಿ, ಸರಳವಾಗಿ ಮದುವೆ ಆಗಿರೋದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇದೀಗ ಕೇವಲ ಐದು ಜನರ ಎದುರು ಹತ್ತೇ ನಿಮಿಷದಲ್ಲಿ ಮದುವೆಯೊಂದು ನಡೆದುಹೋಗಿದೆ. ಮಧ್ಯಪ್ರದೇಶದ ಜಿಲ್ಲೆಯೊಂದಕ್ಕೆ ದೆಹಲಿಯಿಂದ ವಧುವೊಬ್ಬಳು ಒಬ್ಬಳೇ ಕಾರಲ್ಲಿ ಬಂದಿದ್ದಾಳೆ. ವಧು ನಿರ್ಮಲಾಳ ಜೊತೆಗೆ ವರ ಗೌರವ್ ಮದುವೆ ನೆರವೇರಿದೆ. ಹತ್ತೇ ನಿಮಿಷದಲ್ಲಿ ಇವರಿಬ್ಬರ ವಿವಾಹ ನೆರವೇರಿಸಲಾಗಿದೆ.