ಇಡ್ಲಿ ಕೊಡಿಸುವುದಾಗಿ ಹೇಳಿ 5 ವರ್ಷದ ಬಾಲಕಿಯನ್ನು ರೇಪ್ ಮಾಡಿದ ವಿವಾಹಿತ

ಚಾಮರಾಜನಗರ, ಮಂಗಳವಾರ, 3 ಡಿಸೆಂಬರ್ 2019 (06:52 IST)

ಚಾಮರಾಜನಗರ : ವಿವಾಹಿತ ವ್ಯಕ್ತಿಯೊಬ್ಬ ಮನೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಗೆ ಇಡ್ಲಿ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದಿದೆ.ಬಸವರಾಜು(35) ಎಸಗಿದ ಆರೋಪಿ. ಸೋಮವಾರ ಬೆಳಿಗ್ಗೆ ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಈತ ಮಗುವಿಗೆ ಇಡ್ಲಿ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಮನೆಗೆ ಬಂದ ಬಾಲಕಿ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಪೋಷಕರು ವಿಚಾರಿಸಿದಾಗ ಬಾಲಕಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ತಕ್ಷಣ ಪೋಷಕರು ರಾಮಾಪುರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕ

ಮೈಸೂರು : ಅಧಿಕಾರ ಕಳೆದುಕೊಂಡ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ಜೆಡಿಎಸ್ ...

news

ಪೊಲೀಸ್ ಅಧಿಕಾರಿಗೆ ಕಾಫಿ ಕೊಟ್ಟು ಕೆಲಸ ಕಳೆದುಕೊಂಡ ನೌಕರ. ಕಾರಣವೇನು ಗೊತ್ತಾ?

ಅಮೇರಿಕಾ : ಪೊಲೀಸ್ ಅಧಿಕಾರಿಯೊಬ್ಬರಿಗೆ ಸ್ಟಾರ್ ಬಕ್ಸ್ ಉದ್ಯೋಗಿಯೊಬ್ಬ ಕಾಫಿ ಕೊಟ್ಟು ತನ್ನ ಕೆಲಸ ...

news

ಶ್ರೀಮಂತ ದೇವರಿಗೆ ಚಂಪಾ ಷಷ್ಠಿ ಮಹೋತ್ಸವ

ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರೋ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಸಡಗರ ಮನೆ ಮಾಡಿದೆ.

news

ಬೈ ಎಲೆಕ್ಷನ್ : ಗೆಲುವಿಗಾಗಿ ಕಾಂಗ್ರೆಸ್ – ಜೆಡಿಎಸ್ ಭಾರೀ ಪೈಪೋಟಿ

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಪಕ್ಷದೊಂದಿಗೆ ...