ಬೆಂಗಳೂರು : ಕರ್ನಾಟಕಕ್ಕೆ ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಅನುದಾನ ಕೊಡುವ ಉದ್ದೇಶವಿದೆ ಎಂದು ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹೇಳಿದ್ದಾರೆ.ರಾಜ್ಯ ಬಿಜೆಪಿ ಘಟಕದಿಂದ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ, ಭೋಗನಂದೀಶ್ವರ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಶ್ವೇಶ್ವರಯ್ಯ, ಪ್ರವೀಣ್ ನೆಟ್ಟಾರು ಮುಂತಾದವರನ್ನು ಸ್ಮರಿಸಿದರು.ಈ ಸಮಾವೇಶ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಏಕೆಂದರೆ ಇದು ಸಂಗ್ರಾಮದ