ಭೀಮಾತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು 6 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಹೆಚ್ಚುವರಿ ಎಸ್ಪಿ ನೇತೃತ್ವದ ತಂಡ 6 ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 1 ಬೊಲೆರೋ ವಾಹನ ಮತ್ತು 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ರಮೇಶ್ ಹಡಪದ, ಭೀಮಶ್ಯಾ ಹರಿಜನ, ನಾಮದೇವ ಹೊಡ್ಡಮನಿ, ರಜಾಕ್ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಬಿಂಜಗೇರಿ ಎಂದು ಗುರ್ತಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ ಎಂದು