ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಝಂಜರವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ತೆರೆದ ಕೊಳವೆಬಾವಿಗೆ ಬಿದ್ದಿದ್ದಾಳೆ. ಬಾಲಕಿಯನ್ನ ಕಾವೇರಿ ಅಜಿತ್ ಮಾದರ ಎಂದು ಗುರ್ತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಂಜೆ 5.30ರ ಸುಮಾರಿಗೆ ಹೊಲದ ಪಕ್ಕದಲ್ಲಿ ಮಗುವನ್ನ ಆಡಲು ಬಿಟ್ಟು ತಾಯಿ ಸವಿತಾ ಸೌದೆ ತರಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಮಗು ಕೊಳವೆ ಬಾವಿಗೆ ಬಿದ್ದದ್ದನ್ನ ಗಮನಿಸಿದ ತಾಯಿ ಹಗ್ಗದ ಮೂಲಕ ಮೇಲೆತ್ತಲು