ಅಮೆರಿಕದಲ್ಲಿ ಹಿಮ ಸುನಾಮಿ ಬೀಭತ್ಸ ಸನ್ನಿವೇಶ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ನಿನ್ನೆಯಷ್ಟೇ 38 ಇದ್ದ ಸಾವಿನ ಪ್ರಮಾಣ ಇಂದು ಏಕಾಏಕಿ 60ರ ಗಡಿ ದಾಟಿದೆ. ನ್ಯೂಯಾರ್ಕ್ ಸಿಟಿ ಒಂದರಲ್ಲೇ 27 ಮಂದಿ ಸೇರಿದಂತೆ ದೇಶಾದ್ಯಂತ ಸುಮಾರು 60 ಮಂದಿ ಮೃತಪಟ್ಟಿದ್ದಾರೆ. ಅತಿಯಾದ ಹಿಮದಿಂದಾಗಿ ಕಾರು, ಬಸ್, ಅಂಬುಲೆನ್ಸ್ ಹಾಗೂ ಟ್ರಕ್ಗಳು ಹಿಮದಲ್ಲಿ ಹೂತು ಹೋಗಿವೆ. ಇದರಿಂದ ವೈದ್ಯಕೀಯ