ಐತಿಹಾಸಿಕ ಬದಾಮಿಯ ಬನಶಂಕರಿ ದೇವಿಗೆ ಇಂದು ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯ್ತು. ಶಕ್ತಿ ದೇವತೆಗೆ ನೇಕಾರರು ನೀಡಿದ ಸುಮಾರು 601 ಸೀರೆಗಳಿಂದ ಬನಶಂಕರಿ ದೇವಿಯನ್ನ ಅಲಂಕರಿಸಲಾಗಿತ್ತು. ದೇವಾಂಗ ಸಮಾಜನದ ಬಂಧುಗಳ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಇಂದು ಹುಣ್ಣಿಮೆ ಆಗಿದ್ರಿಂದ ದೇವಿಯನ್ನ ಕಣ್ತುಂಬಿಕೊಳ್ಳಲು ನೂಕು ನುಗ್ಗಲು ಉಂಟಾಗಿತ್ತು. ಜೊತೆಗೆ ದೇವಾಲಯ ಸುತ್ತಮುತ್ತ ವಿವಿಧ ಬಗೆಯ ಸೀರೆಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಾವಿಯ ರಾಮದುರ್ಗದಿಂದ ಸೀರೆಗಳನ್ನ ಮೆರೆವಣಿಗೆ ಮಾಡುವ ಮೂಲಕ