ಬೆಂಗಳೂರು: 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 62 ವರ್ಷದ ವೃದ್ಧನೊಬ್ಬ ಮಾನಭಂಗ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ ವೆಂಕಟರಮಣಪ್ಪ ತನ್ನ ಮಗಳ ಮನೆಗೆ ಬಂದಿದ್ದಾಗ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಸ್ವೀಟ್ ಕೊಡಿಸುವುದಾಗಿ ಮನೆಯೊಳಗೆ ಕರೆದೊಯ್ದು ಹೀನ ಕೃತ್ಯವೆಸಗಿದ್ದಾನೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಎನ್ನಲಾಗಿದೆ. ಮಗಳನ್ನು ಕಾಣದೇ ಮನೆಯವರು ಹುಡುಕುತ್ತಿದ್ದಾಗ ಆಕೆ ಅರ್ಚಕರ