ಬೆಂಗಳೂರು : 300 ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಮತ್ತು 643 ಡೀಸೆಲ್ ಬಸ್ಗಳನ್ನು(ಬಿಎಸ್-6) ಖರೀದಿಸುವ ಪ್ರಸ್ತಾವಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಿಲೋ ಮೀಟರ್ಗೆ ₹48.90 ನಿಗದಿ ಮಾಡಿದ್ದ ಅಶೋಕ್ ಲೇಲ್ಯಾಂಡ್ ಕಂಪನಿಗೆ ಕಾರ್ಯಾದೇಶ ನೀಡಲು ಮಂಡಳಿ ಅನುಮೋದನೆ ನೀಡಿದೆ. ಇತರ ಕಂಪನಿಗಳು ಇದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದ್ದರಿಂದ ಅವುಗಳನ್ನು ಕೈಬಿಡಲಾಗಿದೆ. 12 ಮೀಟರ್ ಉದ್ದದ 43 ಆಸನಗಳ ಸಾಮರ್ಥ್ಯದ