ಕಲಬುರಗಿ : ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕರೆಲ್ಲರೂ ಪಣತೊಟ್ಟು ಓಡಾಡುತ್ತಿರುವಾಗ, ಅಭ್ಯರ್ಥಿ ಉಮೇಶ್ ಜಾಧವ್ ಅವರು ಮಾತ್ರ ನನಗೆ ಬಿಜೆಪಿ ಇನ್ನೂ ಸೆಟ್ ಆಗುತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಲಬುರಗಿಯ ಎಸ್ ಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನಗೆ ಡು ಆರ್ ಡೈ ಅನ್ನುವಂತ ಸ್ಥಿತಿ. ನನಗೆ ಇನ್ನೂ ಸೆಟ್ ಆಗುತ್ತಿಲ್ಲ. ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್ ಎಂದು ಹೇಳಿದ್ದಾರೆ.