ಮುಂಬೈ ಮೂಲದ ನಂಟಿನಿಂದ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, 13 ಜನರಲ್ಲಿ ಹೊಸದಾಗಿ ವೈರಸ್ ಪತ್ತೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಜನರಲ್ಲಿ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಹೊಸದಾಗಿ ವರದಿಯಾದ ಎಲ್ಲಾ ಪ್ರಕರಣಗಳಿಗೆ ಮುಂಬೈ ಮೂಲದ ನಂಟಿದೆ.ಹಾಸನ ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರದಿಂದ ಆಗಮಿಸಿದವರಿಂದ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊಳೆನರಸೀಪುರ ತಾಲ್ಲೂಕು ಹಾಗೂ 7ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ.ಈ