ರಾಜ್ಯ ರಾಜಧಾನಿ ಬೆಂಗಳೂರಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ ನಗರದ ಮಾಣಿಕ್ ಪೆರೇಡ್ ಮೈದಾನನದಲ್ಲಿ ಅದ್ದೂರಿಯಾಗಿ ನಡೆಯಿತು. ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಜರಿದ್ರು. ಧ್ವಜಾರೋಹಣ ಮಾಡಿದ ನಂತರ ರಾಜ್ಯದ ಜನರಿಗೆ ಸುಮಾರು 21 ನಿಮಿಷಗಳ ಕಾಲ ಗಣರಾಜ್ಯೋತ್ಸವದ ಸಂದೇಶ ನೀಡಿದ್ರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್. ಇವತ್ತಿನ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸೈನಿಕರ ಬೈಕ್ ಮೇಲಿನ ಸಾಹಸ ಪ್ರದರ್ಶನಗಳು ಎಲ್ಲರನ್ನ ಆಕರ್ಷಿಸಿತ್ತು.