ಚೀನಾದಲ್ಲಿ ಕಾಣಿಸಿಕೊಂಡಿರೋ ಕೊರೊನಾ ವೈರಸ್ 75 ಸಾವಿರ ಗಡಿಯನ್ನು ದಾಟಿ ಹೆಚ್ಚಿನ ಜನರಿಗೆ ಹರಡುತ್ತಿದೆ. ಈಗಾಗಲೇ 2200 ಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಈ ನಡುವೆ ಚೀನಾದಲ್ಲಿರೋ ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದೆ. ದೇಶದ ವಾಯು ಸೇನೆ ನೆರವಿನಿಂದ ಚೀನಾದಲ್ಲಿರುವ ಭಾರತೀಯರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ.ಕೊರೊನಾ ಸದ್ಯ ಜಾಗತಿಕವಾಗಿ ಮಹಾ ಕಂಟಕ ತಂದೊಡ್ಡುತ್ತಿದೆ.