ರಾಜ್ಯದಲ್ಲಿ ದಿನೇ ದಿನೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಕಳೆದ 40 ತಿಂಗಳಲ್ಲಿ ರಾಜ್ಯದಲ್ಲಿ752 ಕೋಮು ಅಥವಾ ಜಾತಿ ಗಲಭೆಗಳು ನಡೆದಿವೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಕೋಮು ಘರ್ಷಣೆಗಳು ಮತ್ತು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ನಿದರ್ಶನಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಜನವರಿ 2019 ರಿಂದ ಎಪ್ರಿಲ್ 2022 ವರೆಗೆ ಕೋಮು ಮತ್ತು ಜಾತಿ ಗಲಭೆಗಳಿಗೆ ಸಂಬಂಧಿಸಿ 752 ಪ್ರಕರಣಗಳು ದಾಖಲಾಗಿವೆ. ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳು (IPC 295 ರಿಂದ 297 ರ