ಕೊರೊನಾ ಭೀತಿಯ ನಡುವೆ ನಡೆದ ಭಾಷಾ ವಿಷಯಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 99.65 ಹಾಜರಾತಿ ಇತ್ತು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಇಂದು ನಡೆದ ಪರೀಕ್ಷೆಯ ವೇಳೆ 18 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದೆ. ಮಕ್ಕಳ ಮುಖದಲ್ಲಿ ಒತ್ತಡ ಕಂಡು ಬರಲಿಲ್ಲ. ಬದಲಿಗೆ ನಿರಾಳತೆ ಹಾಗೂ ಸಂತೋಷ ಇತ್ತು ಎಂದರು. ರಾಜ್ಯದ ಹಲವಡೆ ವ್ಯಾಪಕ ಮಳೆ ಇದ್ದರೂ