ಕೇಂದ್ರ ಸರ್ಕಾರದಿಂದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಟರಿ ಎಜುಕೇಶನ್ ಅನುಮತಿ ಪಡೆಯದಿದ್ದರೂ, ತಮ್ಮದು ಸಿಬಿಎಸ್ಇ ಸಿಲಬಸ್ ಹೊಂದಿದ ಶಾಲೆಯೆಂದು ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಮಕ್ಕಳ ದಾಖಲಾಗಿ ಮಾಡಿಕೊಂಡಿರುವ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಯ ಕರ್ಮಕಾಂಡ ಹೊರಬಿದ್ದಿದೆ. ಆದರೆ, ಶಾಲೆ ಪರಿಶೀಲನೆಗೆ ಬಂದಿರುವ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಶಾಲೆಯಲ್ಲಿ 9 ಮತ್ತು 10 ನೇ ತರಗತಿ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ.