ಕೂಡಲಸಂಗಮದಲ್ಲಿ ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಲಿದೆ.ವಿಜಯಪುರದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದಾರೆ. ಅಂದು ಸಾಮೂಹಿಕ ಇಷ್ಟಲಿಂಗ ಮಾಹಾಪೂಜೆ ಹಾಗೂ ದೀಕ್ಷಾ ಅಭಿಯಾನ ನಡೆಸಲಾಗುವುದು. ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಗುವುದು. ಇದೇ ವೇಳೆ ಸಮಾಜದ ನೂತನ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಸರ್ ಸಿದ್ದಪ್ಪ ಕಂಬಳಿ ರಾಜ್ಯ ಮಟ್ಟದ ಪಂಚಮಸಾಲಿ ವಿದ್ಯಾರ್ಥಿ