ಬೆಂಗಳೂರು : ಮನೆಯ ಅಂದಕ್ಕಾಗಿ ವ್ಯಕ್ತಿಯೊಬ್ಬ ಹಚ್ಚ ಹಸಿರಾದ ಮರಕ್ಕೆ ವಿಷ ಹಾಕಿ ಕೊಂದ ಘಟನೆ ಬೆಂಗಳೂರಿನ ಆರ್.ಆರ್. ನಗರದ ಪಂಚಶೀಲಾ ಬ್ಲಾಕ್ ನಲ್ಲಿ ನಡೆದಿದೆ. ನರೇಂದ್ರ ಎಂಬಾತ ಇಂತಹ ಕೃತ್ಯ ಎಸಗಿದ ಪಾಪಿ. ಈತ ಹೊಸದಾಗಿ ಮನೆಯನ್ನು ನಿರ್ಮಿಸಿದ್ದ. ಆದರೆ ಮನೆಯ ಎದುರುಗಡೆ ಇರುವ 15 ವರ್ಷದ ಹಳೆಯ ಮರ ಮನೆಯ ಅಂದವನ್ನು ಕೆಡಿಸುತ್ತಿದೆ ಎಂದು ಮರದ ಸುತ್ತಲೂ ತೂತು ಮಾಡಿ 40 ವಿಷಕಾರಿ ಇಂಜೆಕ್ಷನ್ ನ್ನು ಹಾಕಿದ್ದಾನೆ.