ಬೆಂಗಳೂರು : ಪುಟ್ಟೇನಹಳ್ಳಿ ವೃದ್ಧರ ಶವ ಬ್ಯಾಗ್ನಲ್ಲಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಸತ್ಯ ತನಿಖೆ ವೇಳೆ ಬಯಲಾಗಿದೆ.ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ (67) ಸಂಜೆ 4:55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ತಿಳಿಸಿದ್ರು.ಬಳಿಕ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು.