ದಾವಣಗೆರೆ : ಸರಿಸುಮಾರು 50 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕಾದ ಗಲಾಟೆಯಿಂದ ವೃದ್ಧೆಯ ಕೊಲೆಯಾದ ಘಟನೆ ನಡೆದಿದೆ.ದಾವಣಗೆರೆ ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹೆಗಡೆ ನಗರದಲ್ಲಿ ನಗರದ ನಿವಾಸಿ ವೃದ್ಧ ಚಮನ್ ಸಾಬ್ (78) ಅನ್ಯೋನ್ಯತೆಯಿಂದ 50 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.ಇಬ್ಬರ ಮಕ್ಕಳನ್ನು ಹೆತ್ತು ಬೆಳೆಸಿದ್ದ ವೃದ್ಧೆ ಷಾಕೀರಾಬಾನು ಮಕ್ಕಳಿಗೆ ಮದುವೆ ಮಾಡಿಸಿ,