Widgets Magazine

ನೆರೆ ಪರಿಹಾರ ನೀಡದ ಹಿನ್ನಲೆ; ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು

ಬೆಂಗಳೂರು| pavithra| Last Modified ಶುಕ್ರವಾರ, 20 ಸೆಪ್ಟಂಬರ್ 2019 (15:00 IST)
ಬೆಂಗಳೂರು : ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆನ್ನರಾಯಪಟ್ಟಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿಗೆ ನಮ್ಮ ರಾಜ್ಯದ ಬಗ್ಗೆ ಕಾಳಜಿ ಇಲ್ಲ. ರಾಜ್ಯ ಪ್ರವಾಹದಿಂದ ನಲುಗಿ ಹೋಗಿದ್ರೂ ಪರಿಹಾರ ಕೊಟ್ಟಿಲ್ಲ. ಇದುವರೆಗೂ ರಾಜ್ಯಕ್ಕೆ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ. ದಿವಾಳಿಯಾಗಿರೋದ್ರಿಂದ್ಲೇ ಪರಿಹಾರ ಕೊಟ್ಟಿಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.


ಅದೇರೀತಿ ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ ಅವರು, ಒಬ್ಬ ಬಿಜೆಪಿ ಸಂಸದನೂ ನೆರೆ ಪರಿಹಾರದ ಬಗ್ಗೆ ಮಾತಾಡ್ತಿಲ್ಲ. ಜನರು ಕಣ್ಣೀರು ಹಾಕಿದ್ರೂ ಮಾತನಾಡುವ ಧಮ್ ಇಲ್ಲ . ಸಂಸದರು ಜನರಿಗೆ ಹೆದರಬೇಕು, ಮೋದಿ, ಶಾ ಅವರಿಗಲ್ಲ. ರಾಜ್ಯದಲ್ಲಿ ಇಷ್ಟು ದೊಡ್ಡ ನೆರೆ ಹಾನಿ ಆಗಿದ್ದರೂ ಒಂದು ನಯಾ ಪೈಸೆ ಕೂಡ ಕೇಂದ್ರ ಸರ್ಕಾರದಿಂದ ಬರದೆ ಇರುವುದು ಇತಿಹಾಸ. ಹೀಗಾಗಿ ಕಾಂಗ್ರೆಸ್ ಪಕ್ಷ 24 ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :