ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ನಿಲ್ಲದಂತಾಗಿದ್ದು, ರಸ್ತೆ ಗುಂಡಿಗೆ ಬಿದ್ದು ಕತ್ತು- ಭುಜದ ಮೂಳೆ ಮುರಿದುಕೊಂಡ ಬೈಕ್ ಸವಾರ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಶವಂತಪುರ ಕ್ಷೇತ್ರದ ಬಿಇಎಲ್ ಸರ್ಕಲ್ ಬಳಿ ಗುಂಡಿಗೆ ಬಿದ್ದು ಜೆಸಿ ನಗರದ ನಿವಾಸಿ ಬಾಲಾಜಿ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ 8 ಘಂಟೆಗೆ ಘಟನೆ ನಡೆದಿದೆ. ಕತ್ತು- ಭುಜದ ಭಾಗ, ಕಾಲಿಗೆ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲಿಗೂ ಹೊಡೆತ ಬಿದ್ದ ಹಿನ್ನಲೆ,