ಡೆತ್ ಸರ್ಟಿಫಿಕೇಟ್ ಪಡೆಯಲೂ ಲಂಚ ಕೊಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದೆ.ಬಿಜೆಪಿ ಹೇಳುತ್ತದೆ ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ ಎಂದು.ಈಗ ಜನರೇ ನಿಮಗೆ ನಿಮ್ಮ ಲಂಚಾವತಾರದ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಇಲ್ಲದಿದ್ದರೆ ಲಂಚ & ಮಂಚದ ಸರ್ಕಾರಕ್ಕೇ ಅಪಮಾನ.ಈ ಕಮಿಷನ್ ಸಚಿವ ಸುಧಾಕರ್ ಗೆ ತಲುಪುತ್ತಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ . ಅಷ್ಟೇ ಅಲ್ಲದೆ ಬಿಜೆಪಿ ಬ್ರಷ್ಟೋತ್ಸವ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.