ಜಲಮಂಡಳಿ ಪೈಪ್ ಒಡೆದು ರಸ್ತೆ ಮೇಲೆ ಹೊಳೆಯಂತೆ ನೀರು ಹರಿದಿದೆ. ಬನಶಂಕರಿ 6ನೇ ಹಂತದ 80 ಫೀಟ್ ರಸ್ತೆ ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಲೇಜೌಟ್ಗೆ ನೀರಿನ ಸಂಪರ್ಕಕ್ಕೆ ಪೈಪ್ ಲೈನ್ ಮಾಡಲಾಗಿತ್ತು.ಆದರೆ ಪೈಪ್ ಲೈನ್ ಮಾಡಿ ಒಂದು ದಶಕದಿಂದ ನೀರು ಬಿಟ್ಟಿರಲಿಲ್ಲ. ಈಗ ಏಕಾಏಕಿ ನೀರು ಬಿಟ್ಟ ಕಾರಣ ರಸ್ತೆ ತುಂಬೆಲ್ಲಾ ನೀರು ಹರಿದು, ಪೈಪ್ ಒಡೆದು ಹೋಗಿದ್ದ ಪರಿಣಾಮ ನೀರು ಹರಿಯುತ್ತಿದೆ.