ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಲವು ವಿಡಿಯೋಗಳು ಮೈ ನಡುಗಿಸುತ್ತವೆ. ಅದರಲ್ಲೊಂದು ಈಗ ವೈರಲ್ ಆಗಿರೋ ಈ ವಿಡಿಯೋ. ದೆಹಲಿಯ ದಯಾಳ್ಪುರ ಎಂಬಲ್ಲಿರುವ ಶೇರ್ಪುರದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಜ್ಞಾನ್ ಸಿಂಗ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪಾಡಿಗೆ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್ಗೆ ಹಿಂದಿನಿಂದ ಬಂದ ಗೂಳಿಯೊಂದು ಗುದ್ದಿದೆ. ಅವರಿಗೆ ಗೂಳಿ ಬಂದು ಗುದ್ದುವವರೆಗೂ ಅಲ್ಲಿ ಗೂಳಿ ಇದ್ದಿದ್ದೇ ಗೊತ್ತಿಲ್ಲ. ಅದೆಷ್ಟರ ಮಟ್ಟಿಗೆ ಜೋರಾಗಿ ಗುದ್ದಿದೆಯೆಂದರೆ, ಜ್ಞಾನ್ ಸಿಂಗ್ ಗಾಳಿಯಲ್ಲಿ ಸ್ವಲ್ಪ