ಬಾವಿಗೆ ಬಿದ್ದ ಕಾರು; ಗಂಡ, ಹೆಂಡತಿ, ಮಕ್ಕಳು ಸಾವು

ದಕ್ಷಿಣ ಕನ್ನಡ| Jagadeesh| Last Modified ಸೋಮವಾರ, 2 ಸೆಪ್ಟಂಬರ್ 2019 (20:51 IST)
ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು ಕುಟುಂಬದ ಸದಸ್ಯರನ್ನೆಲ್ಲಾ ಬಲಿ ಪಡೆದುಕೊಂಡಿದೆ.

ಭಾರೀ ಅವಘಡದಲ್ಲಿ ನಾಲ್ವರು ಜಲಸಮಾಧಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಾವು ಬಳಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿದ್ದರು. ರಸ್ತೆ ಬದಿಯಲ್ಲಿದ್ದ 20 ಅಡಿ ಆಳದ ಬಾವಿಗೆ ಕಾರು ಬಿದ್ದಿದೆ.

ಭಾರೀ ಮಳೆ ಇದ್ದಿದ್ರಿಂದ ಬಾವಿಯ ಪೂರ್ಣ  ನೀರು ತುಂಬಿಕೊಂಡಿತ್ತು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಘಟನೆಯಲ್ಲಿ ಅಶೋಕ (48), ಹೇಮಲತಾ, ಕುಮಾರಿ ವರ್ಷಕುಮಾರ, ಯಶಸ್ ಸಾವನ್ನಪ್ಪಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :