ದೈತ್ಯ ಗಾಳಿಪಟದ ತಂತಿಗಳಲ್ಲಿ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಾಡಿದ ಘಟನೆ ತೈವಾನ್ ಹಬ್ಬದ ಸಮಯದಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಗಾಳಿಪಟದೊಂದಿಗೆ ಮೇಲಕ್ಕೆ ಹಾರಿದ ಮಗುವನ್ನು ಕಂಡು ಉತ್ಸವದಲ್ಲಿ ಪಾಲ್ಗೊಂಡ ಜನರು ಭಯಭೀತರಾದರು.