ಇದು ಸುಳಿಗಾಳಿಯಲ್ಲಿ ಆಟ ಆಡುವ ಶ್ವಾನದ ದೃಶ್ಯ. ಸುಳಿಗಾಳಿಯನ್ನು ಕುತೂಹಲದಿಂದ ನೋಡುವ ಶ್ವಾನವೊಂದು ಪ್ರತಿಕ್ರಿಯಿಸಿದ ಪರಿ ಇದು. ಈ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸದೇ ಇರದು. ಬೀಸುತ್ತಿದ್ದ ಭಾರೀ ಗಾಳಿಗೆ ಮಾರ್ಗದ ಮಧ್ಯದಲ್ಲಿ ಧೂಳಿನ ಸುಳಿ ಏಳುವ ದೃಶ್ಯದ ಮೂಲಕ 15 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ. ಇದೇ ದಾರಿಯಲ್ಲಿ ಮಗುವೊಂದು ಸಾಗುತ್ತಿರುವ ದೃಶ್ಯ ಕೂಡಾ ಕಾಣಿಸುತ್ತದೆ. ಅಷ್ಟರಲ್ಲಿ ಅಲ್ಲಿಗೆ ಓಡಿ ಬರುವ ಶ್ವಾನ ಈ ಸುಳಿಯ ನಡುವೆಯೇ ಹೋಗಿ