ನಾಯಿ ತನ್ನ ಪೋಷಕನನ್ನು ಅನುಕರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರರ್ಥ ಸಾಕುಪ್ರಾಣಿಗಳು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವುಳ್ಳವು. ತನ್ನ ಪೋಷಕರ ಮನಸ್ಥಿತಿಯನ್ನು, ಪರಿಸ್ಥಿತಿಯನ್ನು ಎಲ್ಲರಿಗಿಂತ ಬಲುಬೇಗನೆ ಅರ್ಥ ಮಾಡಿಕೊಂಡು ಸ್ಪಂದಿಸುವ ಸ್ನೇಹಪೂರ್ಣ ಜೀವಿಗಳು. ಉದ್ಯಮಿ ಹರ್ಷ ಗೋಯೆಂಕಾ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪೋಷಕನ ಕಾಲು ಫ್ರ್ಯಾಕ್ಚರ್ ಆಗಿ ಕುಂಟುವ ಪರಿಸ್ಥಿತಿ ಬಂದಿದೆ. ಆದರೂ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದಾನೆ. ನಾಯಿಯೂ ಕೂಡ ಇವನಿಗೆ ಕುಂಟುತ್ತ ಸಾಥ್ ಕೊಡುತ್ತಿದೆ. ಈ ವಿಡಿಯೋ