ಅನೈತಿಕ ಸಂಬಂಧ ಬಿಡದ ಮಗಳನ್ನೇ ಕೊಂದ ತಂದೆ

ಬಳ್ಳಾರಿ| Jagadeesh| Last Modified ಬುಧವಾರ, 12 ಫೆಬ್ರವರಿ 2020 (11:11 IST)

ಮದುವೆಗಿಂತಲೂ ಮೊದಲೇ ಬೇರೊಬ್ಬನನ್ನು ಪ್ರೀತಿಸಿ ಮದುವೆಯಾದ ಬಳಿಕವೂ ಮುಂದುವರಿಸಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನೆ.

 

ಬಳ್ಳಾರಿ ಜಿಲ್ಲೆ ಗೋಡೆಹಾಳದಲ್ಲಿ ಘಟನೆ ನಡೆದಿದ್ದು, ಕವಿತಾ ಳನ್ನು ಆಕೆಯ ತಂದೆ ಗೋಪಾಲ ರೆಡ್ಡಿ ಕೊಲೆ ಮಾಡಿದ್ದಾನೆ.

ಮದುವೆಗಿಂತ ಮೊದಲು ಕವಿತಾ - ಪ್ರಕಾಶ್ ನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಮನೆಯಲ್ಲಿ ಬೇರೊಬ್ಬನೊಂದಿಗೆ ಮದುವೆ ಮಾಡಿದ್ರು. ಮಗು ಕೂಡ ಇದೆ.

ಆದರೆ ಮದುವೆ ನಂತರವೂ ಕವಿತಾ - ಪ್ರಕಾಶ್ ಜೊತೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಒಂದೆರಡು ಬಾರಿ ಪ್ರಕಾಶ್ ನೊಂದಿಗೆ ಕೆಲವು ದಿನ ಓಡಿ ಹೋಗಿದ್ದಳಂತೆ.

ಹೀಗಾಗಿ ಮಗಳ ಕೆಲಸ ಸಹಿಸದ ತಂದೆಯೇ ಮಗಳು ಕವಿತಾಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

 

 

ಇದರಲ್ಲಿ ಇನ್ನಷ್ಟು ಓದಿ :