ಪ್ರಥಮ ದರ್ಜೆ ಸಹಾಯಕಿಯನ್ನು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪೋಲಿ ಮಾತುಗಳ ಮೂಲಕ ಲೈಂಗಿಕ ಕಿರುಕುಳ ನೀಡಿ ಹಾಸಿಗೆಗೆ ಕರೆದಿದ್ದಾನೆ ಎಂದು ಆರೋಪಿಸಲಾಗಿದೆ.ಕ್ಯಾತಸಂದ್ರದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ ಅನುಕಂಪದ ಆಧಾರದ ಮೇಲೆ ಎಫ್ಡಿಎ ಕೆಲಸಕ್ಕೆ ಸೇರಿದ ಮಹಿಳಾ ಸಿಬ್ಬಂದಿಗೆ ಕೆಲಸ ಹೇಳಿಕೊಡುವ ನೆಪದಲ್ಲಿ ಏಕಾಂತವಾಗಿ ಕಚೇರಿಗೆ ಕರೆಸಿಕೊಂಡು ಆಕೆಯ ಅಂಗಾಂಗಗಳ ವರ್ಣನೆ ಮಾಡಿದ್ದಾನೆ. ನನ್ನ ಜೊತೆ ಸಹಕರಿಸು, ಎಲ್ಲ ಕೆಲಸವನ್ನೂ ನಿನಗೆ ಕಲಿಸಿ ಕೊಡುತ್ತೇನೆ ಎಂದು ಹೇಳಿದ್ದಾನೆ