ಅವಳು ಇಂಜಿನಿಯರಿಂಗ್ ಓದುತ್ತಿದ್ದಳು. ನೂರಾರು ಬಣ್ಣದ ಕನಸುಗಳನ್ನು ಕಂಡಿದ್ದ ಹುಡುಗಿ ತನ್ನದಲ್ಲದ ತಪ್ಪಿಗೆ ನಡುರಸ್ತೆಯಲ್ಲೇ ಬರ್ಬರವಾಗಿ ಸಾವನ್ನಪ್ಪಿದ್ದಾಳೆ.ಕುರಿ ಕಾಯುವವರ ಹತ್ತಿರ ಇದ್ದ ಕುಡುಗೋಲು ಯುವತಿಯೊಬ್ಬರ ಜೀವ ತೆಗೆದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಕುತ್ತಿಗೆಗೆ ಕುಡುಗೋಲು ತಲುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಕಲಬುರಗಿಯ ರಾಮಮಂದಿರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮೇಘಾ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.ಆಕ್ಟಿವಾದಲ್ಲಿ ವೇಗವಾಗಿ ಕಾಲೇಜಿಗೆ ಯುವತಿ ತೆರಳುತ್ತಿದ್ದಳು. ಅದೇ ಮಾರ್ಗದಲ್ಲಿ ಕುರಿಗಾಯಿಯೊಬ್ಬನ ತನ್ನ