ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲೀಫ್ಟಿಂಗ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ದೊರೆತಿದೆ.ಈ ಸಾಧನೆ ಮಾಡಿದ ಹುಡುಗಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರೋ ಕುಗ್ರಾಮವಾದ ಸೋಲೂರೂ ಗ್ರಾಮದವರಾಗಿದ್ದಾರೆ. ಚಿನ್ನದ ಪದಕ ಗೆದ್ದಿದ್ದಕ್ಕೆ ತಾಲೂಕಿನಾದ್ಯಂತ ಹರ್ಷ ವ್ಯಕ್ತವಾಗಿದೆ. ಇನ್ನು ಈ ಸಾಧನೆ ಮಾಡಿರೋದು ಗುರುಮೂರ್ತಿ ವನಜಾಕ್ಷಿ ದಂಪತಿಯ ಪುತ್ರಿ ಶಾಲಿನಿ. ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ