ಗಾರ್ಡನ್ ಸಿಟಿಯ ತುಂಬೆಲ್ಲಾ ಈಗ ವಸಂತ ಋತುವಿನ ಸೊಬಗು. ಎಲ್ಲೆಲ್ಲೂ ಹಳದಿ, ತಿಳಿ ಗುಲಾಬಿ ಹೂ ಗಳ ರಂಗು. ಮನೆಯಿಂದ ಹೊರ ಹೋದರೆ ಸಾಕು ಕಣ್ಣಿಗೆ ಹಿತಾನುಭವ, ಅದರಲ್ಲೂ ಮುಂಜಾನೆ, ಮುಸ್ಸಂಜೆ ಹೊತ್ತಲ್ಲಿ ತಣ್ಣನೆಯ ಗಾಳಿಯ ಜೊತೆ ಈ ಪುಷ್ಪ ಸೌಂದರ್ಯ ಕಣ್ತುಂಬಿಕೊಳ್ಳೋದೆ ಚೆಂದ. ಎಲ್ಲೆಲ್ಲೂ ಮನಸೆಳೆಯುವ ಹಳದಿ ಹೂಗಳ ಚೆಲುವು. ಒಂದೆಡೆ ಪ್ರಕೃತಿದೇವಿಯು ಅರಿಶಿನ ಸೀರೆಯುಟಂತೆ ಕಾಣುವ ಪರಿ. ಮತ್ತೊಂದೆಡೆ ಮುಡಿಗೆ ತಿಳಿ ಗುಲಾಬಿ ಮುಡಿದು ಕಂಗೊಳಿಸುವ ವಸಂತ.. ಇದು