ಶಿವಮೊಗ್ಗದ ಸಾಗರ ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ಹಿಂದೆ ಯುಜಿಡಿ ಕಾಮಗಾರಿ ನಡೆಸಲಾಗಿತ್ತು ಅದೇ ರೀತಿ 30ನೇ ವಾರ್ಡಿನಲ್ಲೂ ಕೂಡ ಯುಜಿಡಿ ಗುಂಡಿ ಕಾಮಗಾರಿ ನಡೆಸಲಾಗಿದ್ದು , ಈಗ ಯುಜಿಡಿ ಗುಂಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ 15 ದಿನಗಳ ಹಿಂದೆ ರಸ್ತೆಯ ಮಧ್ಯಭಾಗದಲ್ಲಿ ಇರುವ ಯುಜಿಡಿ ಗುಂಡಿಯ ಮುಚ್ಚಳ ಮುರಿದು ಹೋಗಿದ್ದು ಬೃಹತ್ ಗಾತ್ರದ ಗುಂಡಿ ಒಂದು ಬಿದ್ದಿದೆ , ಸ್ಥಳೀಯರು ತಕ್ಷಣ ಸ್ಥಳಿಯ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.