ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ವಕೀಲರೇ ಪತ್ತೆ ಹಚ್ಚಿ, ದೂರು ದಾಖಲಿಸಿರುವ ಪ್ರಕರಣ ನಡೆದಿದೆ.ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ನ್ಯಾಯಾಲಯದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ಎಂ.ಪಿ.ಪ್ರವೀಣ್ ಕುಮಾರ್ ಎಂಬುವರೇ ನಕಲಿ ದಾಖಲಾತಿ ಸೃಷ್ಠಿಸಿ ವಕೀಲಗಿರಿ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಈತ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದ ನಿವಾಸಿಯಾಗಿದ್ದು, 1998-99 ನೇ ಸಾಲಿನಲ್ಲಿ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಗೆ ಸೇರ್ಪಡೆಯಾಗಿದ್ರು. ಆದ್ರೆ, ಕೋರ್ಸ್