ನೇಪಾಳ ಮೂಲದ ಸಹಜ ಸುಂದರಿ, ಹೆಸರು ಕೃಷ್ಣ ಕುಮಾರಿ. ಬೆಂಗಳೂರಿನ ರಾಮಮೂರ್ತಿ ನಗರದ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿ ಸ್ನೇಹಿತ ಸಂತೋಷ್ ಧಮಿಯೊಂದಿಗೆ ವಾಸವಿದ್ದಳು. ಎರಡು ವರ್ಷಗಳಿಂದಲೂ ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ ಅಂತಾ ಒಂದೇ ಮನೆಯಲ್ಲಿ ಆರಾಮಾಗಿದ್ರು. ಆದರೆ ತಡರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಕೃಷ್ಣಕುಮಾರಿಯ ಕೊಲೆಯಾಗಿದೆ. ಕೃಷ್ಣ ಕುಮಾರಿ ಮೇಲಿನ ಅನುಮಾನದಿಂದ ಆಕೆಯ ಕತ್ತು ಹಿಸುಕಿ ಸಂತೋಷ್ ಧಮಿ ಕೊಲೆಗೈದಿದ್ದಾನೆ. ಇಬ್ಬರೂ ಸಹ ನೇಪಾಳ ಮೂಲದವರು.