ಬೆಂಗಳೂರು : ಮಾಗಡಿ ಮತ್ತು ಮೈಸೂರು ರಸ್ತೆಯ ಟೋಲ್ ನಡುವೆ ಈ ಘಟನೆ ನಡೆದಿದೆ. ಲಾರಿ ಚಾಲಕ ಮತ್ತೊಂದು ವಾಹನದ ಜೊತೆ ಅಪಘಾತವನ್ನು ತಪ್ಪಿಸಲು ಹೋಗಿ ಈ ಸರಣಿ ಅಪಘಾತ ನಡೆದಿದೆ. ಕಾಲು ತುಂಡಾದ ಚಾಲಕನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಸರಣಿ ಅಪಘಾತಕ್ಕೆ ಲಾರಿ ಚಾಲಕನ ಕಾಲು ತುಂಡಾಗಿರುವ ಘಟನೆ ಶುಕ್ರವಾರ ನೈಸ್ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಲಾರಿ, ಕಾರು ಸೇರಿ ಹಲವು ವಾಹನಗಳಳು ಜಖಂಗೊಂಡಿವೆ.