ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ವ್ಯಕ್ತಿ ಅರೆಸ್ಟ್

ಮುಂಬೈ, ಮಂಗಳವಾರ, 14 ಮೇ 2019 (07:30 IST)

ಮುಂಬೈ : ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಯಿಂದ ಹಣ ದೋಚಲು ತನ್ನ ಮರ್ಮಾಂಗ ತೋರಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಕೋಪ್ರಿ ನಿವಾಸಿ ಸಂದೀಪ್ ಕುಂಭಕರ್ಣ (38) ಬಂಧಿತ ಆರೋಪಿಯಾಗಿದ್ದು, ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯೊಬ್ಬರು ಹಣ ಡ್ರಾ ಮಾಡುತ್ತಿದ್ದಾಗ ಅಲ್ಲಿಗೆ ಬಂದ  ಸಂದೀಪ್ ತನ್ನ ಮರ್ಮಾಂಗವನ್ನು ತೋರಿಸಿ ಅದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ. ತಕ್ಷಣ ಮಹಿಳೆ ಈ ದೃಶ್ಯವನ್ನು ತನ್ನ ಮೊಬೈಲ್‍ ನಲ್ಲಿ ಸೆರೆ ಹಿಡಿದಿದ್ದಾಳೆ. ಇದರಿಂದ ಮುಜುಗುರಕ್ಕೆ ಒಳಗಾದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.


ಬಳಿಕ ಮಹಿಳೆ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿಗೆ ವಿಡಿಯೋ ತೋರಿಸಿದ್ದಾಳೆ. ಕೂಡಲೇ ಜಾಗೃತರಾದ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಈ ಸಂಬಂಧ ಸಂದೀಪ್ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನಭಂಗಕ್ಕೆ ಯತ್ನ), 509 (ಮಹಿಳೆಯ ಮುಂದೆ ಅಸಭ್ಯ ರೀತಿ ವರ್ತನೆ) ಅಡಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಗಂಟಲಿಗೆ ಅಪಾಯ ತಂದುಕೊಂಡ ನವಜೋತ್ ಸಿಂಗ್ ಸಿಧು!

ನವದೆಹಲಿ: ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆಗಳಿಂದಲೇ ...

news

ಸಿದ್ದರಾಮಯ್ಯ ಒಂಥರಾ ಆನೆ ಇದ್ದ ಹಾಗಂತೆ…

ಆನೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳೆಲ್ಲ ಬೊಗಳುತ್ತಿರುತ್ತವೆ. ಹಾಗಂಥ ಆನೆ ಹಿಗ್ಗೋದೂ ಇಲ್ಲ ...

news

ಸಿದ್ದು, ವಿಶ್ವನಾಥ್ ವಾಕ್ಸಮರ: ಜಿಟಿಡಿ ಸಿಡಿಸಿದ್ರು ಬಾಂಬ್

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ ...

news

ಸಿದ್ದರಾಮಯ್ಯ, ಯತ್ನಾಳ್ ಹುಚ್ಚರು ಎಂದ ಈಶ್ವರಪ್ಪ

ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಬ್ಬ ಹುಚ್ಚ ಅಂತ ಕೆ.ಎಸ್. ...