ರಾತ್ರಿಯಾದರೆ ಹೆಣ್ಮಕ್ಕಳು ಸೇಫ್ ಅಲ್ಲ ಎಂಬುದಕ್ಕೆ ಪೂರಕವಾಗುವಂತೆ ಚಿತ್ರನಟಿ, ಮಾಡಲ್ ಮೇಲೆ ನಿನ್ನೆ ತಡರಾತ್ರಿ ಲೈಂಗಿಕ ದೌರ್ಜನ್ಯ ನಡೆದಿದೆ. ಒಬ್ಬಂಟಿ ಯುವತಿಯರು ಹಾಗೂ ಮಹಿಳೆಯರಿಗೆ ಕಾಮುಕರ ಕಾಟ ಹೆಚ್ಚಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಟ್ಯಾಕ್ಸಿ ಚಾಲಕನಿಂದ ಅಸಭ್ಯ ವರ್ತನೆ ನಡೆದಿದ್ದು, ಟ್ಯಾಕ್ಸಿ ಚಾಲಕನ ಜೊತೆ ಕಂಪನಿಯ ಮೇಲೂ ನಟಿ ದೂರು ದಾಖಲಿಸಿದ್ದಾರೆ. ರಾತ್ರಿ 10-30ರ ಸಮಯದಲ್ಲಿ ಜಕ್ಕೂರಿನಿಂದ ಬಾಬು ಸಾಬ್ ಪಾಳ್ಯಕ್ಕೆ ರ್ಯಾಪಿಡೋ ಟ್ಯಾಕ್ಸಿ ಬುಕ್ ಮಾಡಿದ್ದ ನಟಿಯ