ಶಿಕ್ಷಕರೋರ್ವರು ಕೋತಿಗೆ ಊಟ ಮಾಡಿಸಿದ ಅಪರೂಪದ ಘಟನೆಯೊಂದು ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದಲ್ಲಿ ನಡೆದಿದೆ. ಜಬ್ಬಲಗುಡ್ಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಇಬ್ರಾಹಿಂ ಅವರೇ ಕೋತಿಗೆ ಊಟ ಮಾಡಿಸಿದವರು. ಹೌದು, ಶಾಲೆಯಲ್ಲಿ ಮಕ್ಕಳ ಜೊತೆಗೂಡಿ ಬಿಸಿಯೂಟ ಮಾಡುತ್ತಿರುವಾಗ ಸ್ವಲ್ಪ ದೂರದಲ್ಲಿ ಕೋತಿಯೊಂದು ಕುಳಿತು ನೋಡುತ್ತಿತ್ತು. ಆದರೆ ಇನ್ನೂ ಮುಂದುವರೆದು ಶಿಕ್ಷಕರ ಕೈಯಿಂದ ಕೋತಿ ಬಿಸಿಯೂಟ ಉಂಡ ಘಟನೆಯೊಂದು ಇದೀಗ ವೈರಲ್ ಆಗುತ್ತಿದೆ. ಮಕ್ಕಳು ಮಂಗಕ್ಕೆ ಒಂದು ತುತ್ತು