ಮಂಡ್ಯ : ತನ್ನ ಪುಟ್ಟ ಕಂದಮ್ಮನ ಎದುರೇ ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ಜರುಗಿದೆ.ಕೆಂಪೇಗೌಡ ಬಡಾವಣೆಯಲ್ಲಿ ವಾಸವಿದ್ದ ರವಿಶಂಕರ್ ಪತ್ನಿ ಕವಿತಾ ತನ್ನ ಒಂದು ವರ್ಷದ ಮಗುವಿನ ಮುಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ತಾಯಿಯನ್ನು ನೋಡಿದ ಒಂದು ವರ್ಷದ ಎಳೆಯ ಕಂದಮ್ಮ ಅಮ್ಮ, ಅಮ್ಮ ಎಂದು ಸುಮಾರು ಎರಡೂವರೆ ಗಂಟೆಗಳ ಕಾಲ ಮಮ್ಮಲ ಮರುಗಿದೆ. ಮಗುವಿನ ಆಕ್ರಂದನ ಕೇಳಿ ಅಕ್ಕ-ಪಕ್ಕದ ಮನೆಯವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.