ಇನ್ನುಮುಂದೆ ತರಕಾರಿ ಅಥವಾ ದಿನಸಿ ತರಲು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಿಡಿದು ಹೊರಗೆ ಹೋಗುವಂತಿಲ್ಲ. ತೀವ್ರತರ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ ಪ್ಲಾಸ್ಟಿಕ್ ದೇಶಾದ್ಯಂತ ಜು.1ರಿಂದ ನಿಷೇಧವಾಗಲಿದೆ. ಈ ಪ್ಲಾಸ್ಟಿಕ್ನ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಹಾಗೂ ಬಳಕೆ ಎಲ್ಲವನ್ನೂ ನಿಷೇಧಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಾಗಿ ನಿಷೇಧ ಜಾರಿಗೊಳಿಸಲು ಆ್ಯಪ್, ಕಂಟ್ರೋಲ್ ರೂಮ್ಗಳು ಹಾಗೂ ವಿಶೇಷ ತಂಡಗಳೊಂದಿಗೆ ಕೇಂದ್ರ ಸರ್ಕಾರ ಸರ್ವರೀತಿಯಲ್ಲೂ ಸಜ್ಜಾಗಿದೆ.