ಬೆಂಗಳೂರು :ವಾಹನ ದಟ್ಟಣೆಯ ಬಗ್ಗೆ ನಿಖರವಾದ ಮಾಹಿತಿ ನೈಜ ಸಮಯದಲ್ಲಿ ದೊರೆಯಲಿದ್ದು, ಜೊತೆಗೆ ಅಪಘಾತ, ಮೆರವಣಿಗೆ ಅಥವಾ ಸಮಾರಂಭಗಳಿಂದ ಉಂಟಾಗಿರುವ ವಾಹನ ದಟ್ಟಣೆಯ ಬಗ್ಗೆಯೂ ಮಾಹಿತಿ ದೊರೆಯಲಿದೆ. ಯಾವ ಸಮಯದಲ್ಲಿ ಯಾವ ಪ್ರದೇಶದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದೆ ಎಂಬ ಬಗ್ಗೆ ಆಯಾ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಮೊಬೈಲ್ ಗೆ ಸಂದೇಶ ಬರಲಿದೆ. ಜೊತೆಗೆ, ವಾಹನ ದಟ್ಟಣೆಯ ತೀವ್ರತೆ, ವಾಹನಗಳ ಸಂಖ್ಯೆಯ ಬಗ್ಗೆಯೂ ಮಾಹಿತಿ ದೊರಕಲಿದೆ.