ಮಂಡ್ಯದಲ್ಲಿ ಸೆ. 29 ರಂದು ಯುವಕನೊಬ್ಬ ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ.ಚಿಕ್ಕಬಾಗಿಲು ಗ್ರಾಮಸ್ಥರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊಲೆಗೈದಿರುವ ಪಶುಪತಿ ಹೇಗಾದರೂ ಮಾಡಿ ಹೆಸರು ಮಾಡಬೇಕೆಂಬ ಹುಚ್ಚುತನದಿಂದ ತನ್ನ ತಾಯಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದಿದ್ದಾರೆ.ಸೆ.29ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಹೊರವಲಯದಲ್ಲಿ ಪಶುಪತಿ ಎಂಬಾತ